current-teachers

Teacher
ಪ್ರಧಾನ ಶಿಕ್ಷಕ

ಗುರು ಗುಪ್ತ

ನಮ್ಮ ಕನ್ನಡ ಶಾಲೆಯ ಮುಖ್ಯೋಪಾಧ್ಯಾಯನಾಗಿ ಸೇವೆ ಸಲ್ಲಿಸುತ್ತಿದ್ದೇನೆ. ಕನ್ನಡ ಭಾಷೆ ಮತ್ತು ಸಂಸ್ಕೃತಿಯನ್ನು ಮಕ್ಕಳಲ್ಲಿ ಬೆಳೆಸುವುದು ನನ್ನ ಮುಖ್ಯ ಉದ್ದೇಶವಾಗಿದೆ. ನನಗೆ Data and Analytics ಕ್ಷೇತ್ರದಲ್ಲಿ 14ಕ್ಕೂ ಹೆಚ್ಚು ವರ್ಷಗಳ ಅನುಭವವಿದೆ. ಆದರೆ ನನ್ನ ಹೃದಯಕ್ಕೆ ಹತ್ತಿರವಾದ ಕೆಲಸ ಕನ್ನಡ ಭಾಷೆಯನ್ನು ಉಳಿಸಿ ಬೆಳೆಸುವುದು. ನಮ್ಮ ಮಕ್ಕಳಿಗೆ ಸರಳವಾಗಿ, ಆತ್ಮವಿಶ್ವಾಸದಿಂದ ಕನ್ನಡ ಮಾತನಾಡಲು, ಓದಲು ಮತ್ತು ಬರೆಯಲು ಸಹಾಯ ಮಾಡುವುದೇ ನನ್ನ ಧ್ಯೇಯ. ಮಕ್ಕಳಿಗೆ ಉತ್ತಮ ಶಿಕ್ಷಣದೊಂದಿಗೆ ಸಂಸ್ಕಾರ ಮತ್ತು ಸಂಸ್ಕೃತಿ ಮೌಲ್ಯಗಳನ್ನು ನೀಡುವಲ್ಲಿ ನಾನು ಬದ್ಧನಾಗಿದ್ದೇನೆ. ಪೋಷಕರ ಸಹಕಾರದೊಂದಿಗೆ ನಮ್ಮ ಕನ್ನಡ ಶಾಲೆಯನ್ನು ಇನ್ನಷ್ಟು ಅಭಿವೃದ್ಧಿಪಡಿಸುವ ಕನಸನ್ನು ಹೊಂದಿದ್ದೇನೆ.

ಪ್ರಮಾಣ ಪತ್ರ : First Aid Course, Lesson Planning Course, How to teach well course.

ಪರವಾನಗಿ : Working With Children

Teacher
ಶಿಕ್ಷಕರು

ತ್ರಿಶಲಾ ತ ದಂಡಾವತಿ

ಹೊರದೇಶದಲ್ಲಿರುವ ಕರುನಾಡ ಮಕ್ಕಳಿಗೆ ನಮ್ಮ ಮಾತೃಭಾಷೆ ಕನ್ನಡವನ್ನು ಹೇಳಿ ಕೊಡುವುದು ನನಗೆ ಹೆಮ್ಮೆಯ ವಿಷಯ. ನಮ್ಮ ಕನ್ನಡ ಶಾಲೆಯಲ್ಲಿ ಕನ್ನಡ ಭಾಷೆಯನ್ನು ಬರೆಯುವದು, ಓದುವದು, ಮಾತನಾಡುವದನ್ನು ಹೇಳಿಕೊಡುವದರ ಜೊತೆಗೆ ಭಾರತದ ಸಂಸ್ಕೃತಿ, ಹಬ್ಬಗಳ ಮಹತ್ವವನ್ನು ತಿಳಿಸಿ ಕೊಡುತ್ತೇವೆ. ಮಾತೃಭಾಷೆಯನ್ನು ತಿಳಿದುಕೊಳ್ಳುವುದು ಅವರ ಹಕ್ಕು, ಅದಕ್ಕೆ ಬೇಕಾದ ಸಹಾಯವನ್ನು ಮಾಡುವ ಕರ್ತವ್ಯ ನಮ್ಮದು. ಪ್ರತಿ ತರಗತಿಯಲ್ಲಿಯೂ ಮಕ್ಕಳು ಹೊಸ ಶಬ್ದಗಳನ್ನು, ಹೊಸದಾಗಿ ಹಳೆಯ ಆಟಗಳನ್ನು ಕಲಿತಾಗ ಎಲ್ಲಿಲ್ಲದ ಖುಷಿ ಆಗುತ್ತದೆ. ಅಕ್ಷರಗಳನ್ನು ಜೋಡಿಸಿ ಓದಿದರೆ ಸಾಧನೆ ಮಾಡಿದಷ್ಟೇ ತೃಪ್ತಿ. ಅವರೊಟ್ಟಿಗೆ ನಾನೂ ಸಾಕಷ್ಟು ವಿಷಯಗಳನ್ನು ಕಲಿಯತ್ತಿರುವೆ. ಕನ್ನಡ ಶಾಲಾ ಶಿಕ್ಷಕಿಯಾಗಿರುವುದು ವೈಯಕ್ತಿಕವಾಗಿ ನನಗೆ ಇದು ಆಸಕ್ತಿಕರ ಸಂಗತಿಯೂ ಆಗಿದೆ. ಸರ‍್ಟಿಫೀಕೇಟ : ಪ್ರಥಮ ಚಿಕಿತ್ಸಾ ತರಬೇತಿ​.

ಪರವಾನಿಗೆ : Work With Children​

Teacher
ಶಿಕ್ಷಕರು

ವೀಣಾ ಗುಬ್ಬಿ

ಆಸ್ಟ್ರೇಲಿಯಾ ದೇಶದಲ್ಲಿ ನನ್ನ ವಾಸ ಪ್ರಾರಂಭವಾಗಿ ಮೂರು ದಶಕಗಳು ಮೀರಿದೆ. ಹೊರದೇಶದಲ್ಲಿ ಬೆಳೆಯುತ್ತಿರುವ ನಮ್ಮ ಮುಂದಿನ ಪೀಳಿಗೆಗೆ ಕನ್ನಡ ಭಾಷೆಯನ್ನು ಒಂದು ರಚನಾತ್ಮಕ ಚೌಕಟ್ಟಿನಲ್ಲಿ ಕಲಿಸಿ ಬೆಳಸಲು ಅನುವು ಮಾಡುತ್ತಿರುವ ಕನ್ನಡ ಶಾಲೆಯ ಪಾತ್ರ, ಪ್ರಯತ್ನ ಶ್ಲಾಘನೀಯ. ಈ ನಿಟ್ಟಿನಲ್ಲಿ ಶಿಕ್ಷಕ ಪರಿಸರದಲ್ಲಿ ಬೆಳೆದು ಅಧ್ಯಾಪಕಿಯಾಗಿದ್ದ ನನಗೆ ನನ್ನ ಅನುಭವವನ್ನು ಪುನಃ ಈ ದೇಶದಲ್ಲಿ ಕನ್ನಡ ಶಾಲೆಯ ಶಿಕ್ಷಕಿಯಾಗಿ ಹಂಚಿಕೊಳ್ಳಲು ಅವಕಾಶ ದೊರೆತಿರುವುದು ಸಂತೋಷದ ಸಂಗತಿ. ಮಕ್ಕಳಲ್ಲಿ ಕನ್ನಡ ಭಾಷೆಯ ಬಗ್ಗೆ ಆಸಕ್ತಿ ಅಭಿರುಚಿ ಬೆಳೆಸುವುದು ನಮ್ಮ ಶಾಲೆಯ ಮುಖ್ಯ ಉದ್ದೇಶ.

ಪರವಾನಿಗೆ : Work With Children​​

Teacher

ವಸುಂಧರ ಶಿವರಾಂ

ನನ್ನ ಹೆಸರು ವಸುಂಧರಾ ಶಿವರಾಂ. ನಾನು ಈಗ ಮೂವತ್ತು ವರ್ಷದಿಂದ ಆಸ್ಟ್ರೇಲಿಯಾ ದೇಶದಲ್ಲಿದ್ದೇನೆ. ಆ ಸಮಯದಲ್ಲಿ, ಪರ್ತ್ ನಲ್ಲಿ ಕನ್ನಡಿಗರ ಸಂಖ್ಯೆ ಬಹಳ ಕಡಿಮೆ ಇತ್ತು. ಹಾಗಾಗಿ ಕನ್ನಡ ಸಂಘ, ಕನ್ನಡ ಶಾಲೆ ಯಾವುದು ಇರಲಿಲ್ಲ. ಭಾಷೆ ಉಳಿಸಿ ಬೆಳೆಸಲು ಕನ್ನಡ ಶಾಲೆ ಅವಶ್ಯಕ.ಈಗ ಆ ಪ್ರಯತ್ನ ನಡೆದಿದೆ. ಕನ್ನಡತಿಯಾಗಿ ನನ್ನ ಅಳಿಲು ಸೇವೆ ಸಲ್ಲಿಸಲು ನನಗೆ ಇದೊಂದು ಸದಾವಕಾಶ. ಹಾಗೂ, ಮಕ್ಕಳ ಜೊತೆ ಬೆರೆತು ಅವರ ಉತ್ಸಾಹ, ಕಲಿಯುವ ಹುಮ್ಮಸ್ಸು, ಉತ್ತೇಜಿಸಲು ಸಹಾಯವಾಗುತ್ತದೆ.

ಪರವಾನಿಗೆ : Work With Children​​

Teacher

ಮಾಜಿ ಶಿಕ್ಷಕರು

ಒಬ್ಬ ಉತ್ತಮ ಶಿಕ್ಷಕಿ/ಶಿಕ್ಷಕನು ಮೇಣದಬತ್ತಿಯಂತೆ - ಅದು ಇತರರಿಗೆ ದಾರಿಯನ್ನು ಬೆಳಗಿಸಲು ತನ್ನನ್ನು ತಾನು ಬಳಸಿಕೊಳ್ಳುತ್ತದೆ ಹಾಗೆ ಆ ಶಿಕ್ಷಕಿ/ಶಿಕ್ಷಕನ ಬೋಧನೆಯು ಮಕ್ಕಳ ಪಾತ್ರವನ್ನು, ಸಾಮರ್ಥ್ಯವನ್ನು ಮತ್ತು ಭವಿಷ್ಯವನ್ನು ರೂಪಿಸುವ ಅತ್ಯಂತ ಉದಾತ್ತ ವೃತ್ತಿಯಾಗಿರುತ್ತದೆ. ಮಕ್ಕಳು ಅವರನ್ನು ಉತ್ತಮ ಶಿಕ್ಷಕ ಎಂದು ನೆನಪಿಸಿಕೊಂಡರೆ, ಅದು ಅವರಿಗೆ ಸಲ್ಲುವ ದೊಡ್ಡ ಗೌರವ. ಇಂತಹ ಎಲ್ಲ ಮಾಜಿ ಶಿಕ್ಷಕಿ/ಶಿಕ್ಷಕರು WAKS ಕನ್ನಡ ಶಾಲೆಗಾಗಿ ಕಷ್ಟಪಟ್ಟು ಕೆಲಸ ಮಾಡಿದ್ದಕ್ಕಾಗಿ ಮತ್ತು ಬದಲಾವಣೆಯನ್ನು ತಂದಿದ್ದಕ್ಕಾಗಿ ಧನ್ಯವಾದಗಳು.

A good teacher is like a candle – it uses itself to light the way for others. Thus, the teacher's teaching is the most noble profession that shapes the role, potential and future of children. If children remember him/her as a good teacher, it is a great honor. "Thank You" to all such former teachers for working hard for WAKS Kannada Shaale and bringing about a change.

The Only Registered Kannada Association in Western Australia

Member Sponsors Volunteer Donate
Menu